Search This Blog

Friday 14 February 2020

ಬದಲಾಗೋಣ

ಸಣ್ಣವರಿರುವಾಗ ನಮಗೆಲ್ಲರಿಗೂ ಒಬ್ಬರು ಫೇವರಿಟ್ ಟೀಚರ್ ಅಂತ ಇದ್ರಲ್ಲ್ವಾ ,ಅವರು ಎಷ್ಟು ಬೈದರೂ  ನಮಗೆ ಬೇಸರ ಆಗತಿರ್ಲಿಲ್ಲ, ಅವರ ಮೇಲೆ ಸಿಟ್ಟು ಕೂಡ  ಬರ್ತಿರ್ಲಿಲ್ಲ .ಯಾಕಂದ್ರೆ ನಮಗೆ ಗೊತ್ತಿತ್ತು  ಅವರು ಬಯ್ಯೋದು ನಾವು improve ಆಗ್ಲಿ ಅಂತ ,ಪ್ರೀತಿಯಿಂದ  ಬೈತಾರೆ  ಅಂತಿದ್ವಿ... ಹಾಗೇನೇ ನಮಗೆ ಇಷ್ಟ ಇಲ್ಲದ ಟೀಚರ್  ಏನು ಅಂದ್ರು ಕೂಡ -" ಇವರು ಯಾವಗ್ಲೂ ನಂಗೆ ಬೈತಾರೆ ,ಸುಮ್ಮ  ಸುಮ್ನೆ ಬೈತಾರೆ" ಅಂತ ಕೋಪಿಸ್ಕೊಳ್ತಿದ್ವಿ  ... ಹಾಗಾದ್ರೆ  ಕೋಪ ಬರೋದಲ್ಲ ಬರಿಸ್ಕೊಳೋದು ಆಲ್ವಾ? .. ಯಾಕಂದ್ರೆ ಕೋಪ  ಹೊರಗಿನಿಂದ ಬರೋದಾದ್ರೆ ಫೇವರಿಟ್ ಟೀಚರ್ ಮೇಲೂ ಬರಬೇಕಿತ್ತು. .ನಾವು ಅಳೋದಿಲ್ಲ ಅಂತ ಡಿಸೈಡ್ ಮಾಡಿದ್ರೆ ಅಳೋದಿಲ್ಲ ,ನಗೋದಿಲ್ಲ ಅಂದ್ರೆ ನಗೋದು ಕೂಡ ಎಲ್ಲ...ಸೊ ನಮ್ಮ ಕೋಪ  ,ಅಳು ,ಬೇಸರ ಇತ್ಯಾದಿ ಭಾವನೆಗಳು ಎಲ್ಲಿಂದನೋ ಬರೋದು ಅಲ್ಲ !!. ಅದೆಲ್ಲ ನಾವ್ ಬರಿಸ್ಕೊಳ್ಳೋದು  ಅನ್ನೋದು ಸತ್ಯ .ಅಂದರೆ ಎಲ್ಲಾ ಭಾವನೆಗಳು ನಮ್ಮೊಳಗಿವೆ ,ನಮಗೆ ಬೇಕಾದ ರೀತಿಯಲ್ಲಿ ,ಸಂಧರ್ಭಗಳಲ್ಲಿ ಅದನ್ನು ಹೊರಗೆ ವ್ಯಕ್ತ ಪಡಿಸುತ್ತೇವೆ ..
       ನಿಜ ,ನಮ್ಮ ಮನಸ್ಸು ಒಂದು ಅದ್ಭುತ ,ನಾವು ಅದನ್ನು ಯಾವ ರೀತಿಯಲ್ಲೂ ಕೂಡ ಬಳಸ್ಕೊಬೋದು.. ನಾವ್ ಒಬ್ಬರನ್ನು ಇಷ್ಟ  ಪಟ್ರೆ , ನಂಬಿದ್ರೆ ಅವರು ನಮಗೆ ಏನ್ ಮಾಡಿದ್ರು ಒಳ್ಳೇದು ಥರಾನೇ ಕಾಣ್ಸುತ್ತೆ...ಅದೇ ನಮಗೆ ಇಷ್ಟ ಇಲ್ಲದವರು ಒಳ್ಳೇದು ಮಾಡಿದ್ರು ಕೂಡ ಕೆಟ್ಟ ಥರಾನೇ ಕಾಣ್ಸುತ್ತೆ ... 
ನೆನಪಿಡಿ ನಮ್ಮ ಪರ್ಮಿಷನ್ ಇಲ್ಲದೆ  ನಮ್ಮನ್ನು ನೋಯಿಸೋ ಶಕ್ತಿ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ.!!!
Expectations hurts...ಖಂಡಿತಾ .. ನಾನು ಒಬ್ಬ ಟೀಚರ್ ಆಗಿ   ಸ್ಟೂಡೆಂಟ್ಸ್ ನಂಗೆ ವಿಶ್ ಮಾಡಲ್ಲ ಅಂತ ಯೋಚನೆ ಮಾಡಿದ್ರೆ, ಯಾರಾದ್ರೂ ವಿಶ್ ಮಾಡದೇ ಇದ್ರೆ   ಬೇಸರ ಆಗುತ್ತೆ , ವಿಶ್ ಮಾಡ್ಲಿ, ಮಾಡದೆ ಇರ್ಲಿ ಐ  ಡೋಂಟ್ ಕೇರ್ ಅಂದ್ರೆ ಬೇಸರ ಆಗಲ್ಲ...ವಿದ್ಯಾರ್ಥಿಗಳು ಸಣ್ಣ ಸಣ್ಣ  ವಿಚಾರಕ್ಕೆ ಬೇಸರ ಪಟ್ಕೊಳದನ್ನ ನೋಡಿದ್ದೇನೆ . 
ಗಂಡ ಆದವನು ನನ್ನ ಹೆಂಡತಿ ನಾನ್ expect ಮಾಡಿದ ರೀತಿ ಇಲ್ಲ ಅಂತಾನೋ  ಅಥವಾ ಹೆಂಡತಿ ನಾನು expect  ಮಾಡಿದ ರೀತಿಯಲ್ಲಿ ನನ್ನ ಗಂಡ ಇಲ್ಲ  ,ನನ್ನನ್ನು ಪ್ರೀತಿಸೋಕೆ ಗೊತ್ತಿಲ್ಲ ಅನ್ನೋ ಫೀಲಿಂಗ್ ನಲ್ಲಿ ಕೊರಗ್ತಾ ಇರೋದನ್ನ ನೋಡ್ತಾ ಇರ್ತಿವಿ .. ಇಬ್ಬರೂ ಕೂಡ ಇನ್ನೊಬ್ಬರ ಸ್ವಭಾವವನ್ನು ಬದಲಾಯಿಸುವ ಪ್ರಯತ್ನ ಮಾಡ್ತಾ ಮಾಡ್ತಾ ಸಂಭಂದಗಳು ಹಾಳಾಗೋದನ್ನ ನೋಡಿದ್ದೇವೆ .. ಸ್ನೇಹಿತರೆ ಅರ್ಥ ಮಾಡಿಕೊಳ್ಳೋಣ  ಪ್ರೀತಿ ಇರೋದು ನಮ್ಮ ನಡುವಿನ ಅಭಿಪ್ರಾಯ ಬೇಧಗಳನ್ನು ಗೌರವಿಸೋದರಲ್ಲಿ ,let us accept the truth, lets respect the individual difference..ನಮ್ಮ ಹಾಗೆ ಯೋಚಿಸುವ ,ನಮ್ಮ ಹಾಗೆ ವರ್ತಿಸುವ ಇನ್ನೊಬ್ಬ ಮನುಷ್ಯ ಈ ಜಗತ್ತಿನಲ್ಲಿಲ್ಲ ..ಒಬ್ಬೊಬ್ಬರುವ ಯೋಚಿಸುವ ,ವರ್ತಿಸುವ ರೀತಿಗಳು ಬೇರೆ ಬೇರೆ ..ನಮ್ಮ ಹಾಗೆ ಬೇರೆಯವರು ಯೋಚಿಸಬೇಕು ,ವರ್ತಿಸಬೇಕು ಅಂದುಕೊಂಡರೆ ಬೇಸರ ಆಗುವುದು ಖಂಡಿತಾ ಹಾಗು ಆ ರೀತಿ ಯೋಚಿಸುವುದು ಮೂರ್ಖತನ ..ಗಂಡ ಹೆಂಡತಿಯ ಸಂಭಂದವಿರಲಿ, ಸ್ನೇಹಿತರಾಗಿರಲಿ ,ಒಂದು ಕುಟುಂಬ ವಾಗಿರಲಿ ನಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು  ಗೌರವಿಸಿ ಪ್ರೀತಿ ಎಂಬ ಆಮ್ಲಜನಕದೊಂದಿಗೆ ಬಾಳಿದಾಗ ಮಾತ್ರ ಸಂಭಂದಗಳು ಗಟ್ಟಿಯಾಗಿ  ಉಳಿಯಲು ಸಾಧ್ಯ. 
ನಮ್ಮ ನಡುವಿನ ಸ್ನೇಹ ,ಪ್ರೀತಿ ಕೇವಲ ವ್ಯಾಲೆಂಟೈನ್ಸ್ ಡೇ ,ಫ್ರೆಂಡ್ಶಿಪ್ ಡೇ ಅಥವಾ whats app ,facebook ಇತ್ಯಾದಿ status ಗಳಿಗೆ ಸೀಮಿತವಾಗಿರದೆ .ಪರಸ್ಪರ ಅರ್ಥ ಮಾಡಿಕೊಳ್ಳುವ ,ಗೌರವಿಸುವ ಪ್ರೀತಿ ನಮ್ಮದಾಗಲಿ .