Search This Blog

Thursday 15 December 2011

ಪ್ರೀತಿಯೆಂಬ ಗೂಡು ಕಟ್ಟಿ.......


ಪ್ರೀತಿಯೆಂಬ ಗೂಡು ಕಟ್ಟಿ ಹಾರಿ ಹೋದ ಹಕ್ಕಿ ನೀನು ,
ಬಾನಿನಲ್ಲಿ ಚುಕ್ಕಿಯಾಗಿ ನಗುತ ನಿಂತೆಯಾ ...!!!?
ಪ್ರೀತಿ ಗೂಡ ಸುಡುಗಾಡು ಮಾಡಿ ,
ಬಳಳುತಿರುವ ನನ್ನ ಕೂಗ ನೀನು ಕೇಳೆಯಾ ...?

ಪ್ರೇಮ ಜ್ಯೋತಿ ಬೆಳಗಿಯಂದು ..ಕತ್ತಲಾಗಿಸಿ ಎನ್ನ ಹೃದಯವ ,
ಬಿರುಗಾಳಿಯಾಗಿಯಿಂದು ದೂರ ಹೋದೆಯಾ ...?
ಪ್ರೇಮ ಧಾರೆಯ ಎರೆದು ನೀನು ....ಬಂಜರಾಗಿಸಿ ಬಾಳ ದಾರಿಯ ,
ಮರೆಯಾಗಿ ಅವಿತೆಯಾ ....?

ಪ್ರೇಮ ಕಾವ್ಯಕೆ ದನಿಯಾಗಿ ನೀನು ,ಕೂಡಿ ಹಾಡಿ
ತಾಳ ತಪ್ಪಿಸಿ ....ರಾಗ ಮರೆತೆಯಾ ....?
ಪ್ರೇಮ ನಾಟ್ಯಕೆ ಹೆಜ್ಜೆಯೊಂದಿಗೆ ಹೆಜ್ಜೆ ಹಾಕಿ ,
ಲಯವ ತಪ್ಪಿಸಿ ನೀನು ..
ಗೆಜ್ಜೆ ಸದ್ದು ಮರೆತು ಬಿಟ್ಟೆಯಾ ...?

                                                                                                  ಧೀರೇಂದ್ರ ..( ಧೀರು )

Wednesday 14 December 2011

kindly visit my friend harish .k. adur's www.ekanasu.com...he has posted my story in his website..

Tuesday 13 December 2011


ಮತ್ತೆ ನೆನಪಾದಳು .......

     
       ಸಾರ್ ಇಟ್ಸ್ ಬೋರಿಂಗ್ ...ಅಂತಾಕ್ಷರಿ ಆಡೋಣ ಎಂದು ವಿದ್ಯಾರ್ಥಿಗಳೆಲ್ಲಾ ಫೋರ್ಸ್  ಮಾಡಿದಾಗ ಆಲ್ಡ್ರಿನ್  (ಆಲ್ದು )ನ  ಮುಖ ನೋಡಿದೆ ...ಸರಿ ಎಂದು ಸನ್ನೆ ಮಾಡಿದ ...
 ಮಾತಾ ಅಮೃತಾನಂದಮಯಿ ಅಮ್ಮನ ಆಶ್ರಮ ತಲುಪಲು ಇನ್ನೂ 2  ಗಂಟೆ ಸಮಯ ಇದ್ದುದರಿಂದ ಬಸ್ಸಿನಲ್ಲಿ ನಮ್ಮ ಅಂತಾಕ್ಷರಿ ಆಟ ಸಮಯ ಕಳೆಯಲು ಸೂಕ್ತ ಅನಿಸಿತು .ಕನ್ನಡ ,ಹಿಂದಿ ,ಮಲಯಾಳಂ ಹಾಡುಗಳ ಮಿಶ್ರಣದೊಂದಿಗೆ ಆಟ ಮುಂದುವರಿದಿತ್ತು ..ಕನ್ನಡದ ವಿದ್ಯಾರ್ಥಿಗಳು ,ನಾನು ,ಆಲ್ದು  ಒಂದು ತಂಡವಾದರೆ...ಕೇರಳ ದ ವಿದ್ಯಾರ್ಥಿಗಳು ಇನ್ನೊಂದು ತಂಡದಲ್ಲಿ ...ನಡುವೆ ಯಾವ ಹಾಡೂ ನೆನಪಾಗದಾಗ ನಾನೇ ಆಶು ಕವನವನ್ನು ಇನ್ಯಾವುದೋ ರಾಗದಲ್ಲಿ ಹಾಡುತಿದ್ದರೆ ಕನ್ನಡದ ವಿದ್ಯಾರ್ಥಿಗಳು ಒಳಗೊಳಗೇ ನಗುತಿದ್ದರು ...
 ನಮಗೆ "ಅ" ಅಕ್ಷರ ಬಂತು ...ಅ..ಅ..ಅರೆ ಯಾವುದಾದರೂ ಹಾಡು ಹಾಡಿ ಎಂದೆ..ಎಲ್ಲರೂ ಅ ...ಅ,,ಅ...ಎನ್ನುತಿದ್ದರು ....ಇನ್ನೊಂದು ತಂಡದವರು ಟಿಕ್ ಟಿಕ್ ಒನ್ ...ಟಿಕ್ ಟಿಕ್ ಟು ....ಟಿಕ್ ಟಿಕ್ ತ್ರೀ...ಅನ್ನುತಿರುವಾಗಲೇ ನಮ್ಮ ವಿದ್ಯಾರ್ಥಿನೀ ಒಮ್ಮೆಲೇ "ಅರಳುವ ಹೂವುಗಳೇ ಆಲಿಸಿರೀ..ಬಾಳೊಂದು ಹೋರಾಟ ಬಣ್ಣಿಸಿರಿ..."ಎಂದು  ಸುಶ್ರಾವ್ಯವಾಗಿ ಹಾಡಲು ಆರಂಭಿಸಿದಾಗ ನಮ್ಮ ತಂಡದ ಎಲ್ಲರೂ ಹೋ ...ಹೋ...ಎಂದು ಖುಷಿಯಂದ ಕೂಗುತಿದ್ದರೆ ,ನಾನು ಮಾತ್ರ ಸ್ಥಬ್ಧನಾಗಿ ,ಏನೋ ನೆನಪಾಗಿ ..ಮೂಕನಾದೆ !!...ಆಲ್ದು ಬೆನ್ನಿಗೆ ಬಡಿದು "ಲೋ ಏನಾಯ್ತು !!!?" ಅಂದಾಗ ..."ಎಲ್ಲಿ ?...ಹಾ !!..ಏನಿಲ್ಲ " ಎಂದೆ ...ಕಿಟಕಿಯಿಂದ ಹೊರ ನೋಡಿದರೆ ಕೊನೆ ಕಾಣದ ಸಮುದ್ರ ಕಾಣಿಸಿತು ..ಅಷ್ಟರಲ್ಲಿಯೇ   ಡ್ರೈವರ್ ಬಸ್ಸಿಗೆ ಬ್ರೇಕ್ ಹಾಕಿದ ..
         ನಮ್ಮನ್ನು ಆಶ್ರಮಕ್ಕೆ ಕರೆ ತಂದ ಅಭಿರಾಮಿ ಅಮ್ಮ (ಬ್ರಹ್ಮಚಾರಿಣಿ )"ನಾವು ಆಶ್ರಮ ತಲುಪಿದ್ದೇವೆ ,ಎಲ್ಲರೂ ರೂಮಿಗೆ ಹೋಗಿ ಫ್ರೆಶ್ ಆಗಿ ಬನ್ನಿ ,45 ನಿಮಿಷ ವಿರಾಮ ,ನಂತರ ಅಮ್ಮನ ಭೇಟಿ ಎಂದರು ...
  ಎಲ್ಲರು ಬಸ್ಸಿನಿಂದಿಳಿದು ರೂಮಿನತ್ತ ನಡೆಯುತಿದ್ದರೆ ,ನಾನು "ಆಲ್ದು 10 ನಿಮಿಷ ,ಸಮುದ್ರದತ್ತ ಹೋಗಿ ಬರುತ್ತೇನೆ "ಎಂದು ಅವನ ಪ್ರತಿಕ್ರಿಯೆಗೂ ಕಾಯದೆ ಹೆಜ್ಜೆ ಹಾಕಿದೆ ..
ಹಿತವಾದ ಗಾಳಿ ಬೀಸುತಿತ್ತು ,ತಟದಲ್ಲಿ ಬಂಡೆಕಲ್ಲಿನ ಮೇಲೆ ಕುಳಿತು ಸಿಗರೆಟ್ ಹಚ್ಚಿದ್ದಾಗ ಹಿತವೆನಿಸಿತು ...ಹೌದು !!!"ಅರಳುವ ಹೂವುಗಳೇ " ಹಾಡು ನನ್ನನ್ನು 5 ವರ್ಷ ಹಿಂದಕ್ಕೆ ಕರೆದೊಯ್ದಿತ್ತು ..ಆ ಹಾಡೆಂದರೆ ನನಗೆ ಬಹಳ ಇಷ್ಟ ....ಆಕೆಗೂ !!!...ದಿನ  ಫೋನಿನಲ್ಲಿ ಮಾತನಾಡಿ ಕೊನೆಯಲ್ಲಿ ನನಗಾಗಿ ಈ ಹಾಡನ್ನು ಪ್ರೀತಿಯಿಂದ ಹಾಡುತಿದ್ದಳು....
 ಅವಳು ಮತ್ತೆ ನೆನಪಾದಳು ....ಆಡಿದ ಮಾತುಗಳು ..ನಗು ...ಪ್ರೀತಿ ..ಎಲ್ಲವೂ ನೆನಪಾಗಿ ಭಾರ ಎನಿಸಿತು ಹೃದಯ ...ಇನ್ನೊಂದು ಧಂ ಎಳೆದೆ ...ಹಾ...!
ಆ ದಿನ ಬೆಂಗಳೂರಿನಲ್ಲಿ ನನ್ನ ಚೇಂಬರ್ ಗೆ ಬಂದು ಮದುವೆಯ ಆಮಂತ್ರಣ ನೀಡಿ .ಅತ್ತು ಬಿಗಿದಪ್ಪಿದಾಗ ..."ಹುಚ್ಚಿ ..ಅಳಬೇಡ ...ನನಗಾಗಿ ನಮ್ಮ ಹಾಡು ಹಾಡ್ತೀಯಾ ? " ಅಂದಾಗಲೂ ಅಳುತ್ತಲೇ  ಹಾಡಿದ್ದಳು...ಸಿಗರೆಟ್ ನ ಕೊನೆ ಬೆರಳಿಗೆ ತಾಗಿ ಬಿಸಿಯಾದಾಗ ,ಎಸೆದು ...ಎದ್ದು ಸಮುದ್ರದ ತೀರಕ್ಕೆ ಬಂದು ನಿಂತೆ ...ಅಲೆಗಳು ಕಾಲಿಗೆ ಬಡಿಯುತಿದ್ದವು ...ಕೊನೆಯೇ ಕಾಣದ ಸಮುದ್ರವನ್ನು ದಿಟ್ಟಿಸಿದೆ ...ಕಣ್ಣ ಹನಿಯೊಂದು ಜಾರಿ ಸಮುದ್ರದಲ್ಲಿ ಸೇರಿ ಮರೆಯಾಯಿತು ....ಈ ಅಲೆಗಳಂತೆ ಏಳು ಬೀಳು ನಮ್ಮ ಬಾಳು .....ಕಣ್ಣ ಹನಿ ಸಮುದ್ರದ ನೀರಿನೊಂದಿಗೆ ಸೇರಿ ಮರೆಯಾದಂತೆ ,ಎಲ್ಲರೊಂದಿಗೆ ಬೆರೆತು ನನ್ನ ನೋವೂ ಮರೆಯಾಗಲಿ ...ಬಾಳೆಂಬ ಹೋರಾಟ ದಲ್ಲಿ  ಎಲ್ಲವನ್ನು ಮರೆತು ಮುನ್ನಡೆಯುತ್ತೇನೆ ..."ಇರುಳಿನ ಹಿಂದೆ ಬೆಳಕುಂಟು " ..ಎಲ್ಲ ನೋವುಗಳನ್ನು ಮರೆತು ಕತ್ತಲಿಂದ ಬೆಳಕಿನಡೆಗೆ ನಡೆಯೋಣ ಅಂದುಕೊಂಡೆ ..ಆ ಹಾಡು ಎಂದಿಗೂ ನನಗೆ ಸ್ಪೂರ್ತಿ ,ಹಾಗು ಆಕೆ ಕೂಡ .....
ಫೋನ್ ರಿಂಗಣಿಸಿತು ..."ಲೋ ಲೋಫರ್  ...ಬೇಗ ಬಾರೋ "ಎಂದು ಆಲ್ದು ಎಂದಾಗ ..."ಬಂದೇ" ಎಂದೆ ....

Sunday 11 December 2011

at amma's aashrama..

when our bus took a left turn to reach aashram,i was shocked to see a a foreigner who  was pulling a trolley filled with garbage!!!...next a foreigner  lady was watering the plants,..as we got down from the bus again shocked to see lots of foreigners in white dress,wearing rudraakshi maala...some one were sweeping the floor, guiding the visitors,serving,cleaning the area..etc...lots of foreigners along with Indians were working there...sorry...not working..serving..or...SEVA..
      All raised as the AMMA came to hall......thousands of people were waiting to meet her...AMMA -the hugging saint got devotees from all over the world(191 countries)..we got a direct entry to stage to meet AMMA...she hugged as i bent down in front of her,Abhi chechi who took care of us at AIMS hospital,Kchi was explaining to AMMA who am I and about our students who tackled the crisis,amma kissed my cheeks ...saw my face...smiled n again hugged me n whispered in my ears.."muddu magu" muddu magu"......muddu magu......
     I was totally confused,many things were running over my mind...was sitting at bank of Arabian sea...lighted my cigar ..wow wat a relaxation!!!...my friend aldrin who was sitting next to me also was in a confused mind!!!..Aldu "how this s possible?"I asked...
"what?"...
"a lady who studied only till 4th standard,with her power got lakhs of  devotees all over the world!!..many foreigners come here n serve..how this s posible?"
aldrin said "we cant comment or decide whether she s right or wrong....its just a fact that these devotees get peace of mind here,so they choose to come"
YES.... of course..instead of commenting whether amma s doing right or wrong....even i want to say..its just a belief ..each individuals has got der own beliefs ,lets dont hurt any ones belief....people get peace by seeing amma ,by serving at aashrama,by her hug n kiss...they get happiness n peace"i said..
.........Friend i met Mr.manoj who s staying permanently at aashram since 13yrs n an interesting lady from France Ms.Gaelle Gautron who came for a visit to aashram for 2months...soon ll be sharing there feelings about amma and about aashram....thank u...  

visit to kerala


hi friends,just came back from a visit to kerala...hats off to our students who tackled the situation well der...visited AMRITHA HOSPITAL and MATHA AMRITHANANANDAMAYI AASHRAM...want to share my experiences n wat i felt at aashram...met AMMAA the hugging saint...lots of people were waiting to meet her,she was ready to hear n meet all the people irrespective of caste,relegion,rich or poor....got a direct entry to meet ammaaa...soon ll share my feelings in my blog....thank u....
ಇಂದು ಕೇರಳದಿಂದ ವಾಪಸ್ ಬಂದೆ ....ನನಗೆ ಬರೆಯುವ ಹುಚ್ಚು ಹಿಡಿಸಿದ ಮಿತ್ರ ,www .e kanasu .com ನ ಸಂಪಾದಕರಾದ ಹರೀಶ್ .ಕೆ .ಆದೂರ್ ತಮ್ಮ ವೆಬ್ ಸೈಟ್ ನಲ್ಲಿ ನನ್ನ ಲೇಖನವನ್ನು ಪ್ರಕಟಿಸಿದ್ದಾರೆ ...ಅವರಿಗೆ ನಾನು ಋಣಿ ....

Tuesday 6 December 2011

at konaje kallu


trekking to "KONAJE KALLU"

ಗೆಳೆಯರೊಂದಿಗೆ ಇಂದು ಕೊಣಾಜೆ ಕಲ್ಲಿಗೆ ಹೋದ ಚಾರಣದ ಅನುಭವಗಳನ್ನು ಆದಸ್ಟು ಬೇಗ ನಿಮ್ಮೊಂದಿಗೆ ಹಂಚಿಕೊಳ್ಳುವೆ ..

Monday 5 December 2011

real story-doddavara sannathana

ಸಭಾಭವನ ಪ್ರವೆಶಿದವನೇ ಪರಿಚಯದ ಮುಖಗಳು ಕಾಣದೆ ಕೊನೆಯ ಸೀಟಿನಲ್ಲಿ ಕುಳಿತು ಕಾರ್ಯಕ್ರಮ ನೋಡುತಿದ್ದೆ ,...ಸ್ವಲ್ಪ ಸಮಯದ ನಂತರ ಒಬ್ಬರು ಬಂದು ಧೀರಜ್? ಎಂದರು.....ನಗುತ್ತ ಹಾ ....ಧೀರೇಂದ್ರ ಅಂದೆ.....ಬನ್ನಿ ಸರ್ ಮುಂದೆ ಕೂರುವ ಎಂದು ಎದುರಿನ ಸೀಟಿನಲ್ಲಿ ಕುಳ್ಳಿರಿಸಿದರು...ನಾನು ಒಂದು ಸಂಸ್ಥೆಯ ಕಾರ್ಯಕ್ರಮಕ್ಕೆ ತೀರ್ಪುಗಾರನಾಗಿ ಆಹ್ವಾನದ ಮೇರೆಗೆ ಹೋಗಿದ್ದೆ...ಆತ್ಮೀಯವಾಗಿ ಮಾತನಾಡಿಸಿದ  ಅವರು ಇನ್ನೊಬ್ಬರಿಗೆ ಪರಿಚಯ ಮಾಡಿಕೊಟ್ಟು ಹೋದರು .....ನೋಡುವಾಗಲೇ ಈ ಮನುಷ್ಯ ಗಡಿಬಿಡಿಯಲ್ಲಿ ಇದ್ದಂತೆ ಕಾಣುತಿತ್ತು ,ಅವಸರದಿಂದಲೇ ನನ್ನ biodata ಬರೆದುಕೊಂಡು ಹೋದರು ....ಮಕ್ಕಳ ಕಾರ್ಯಕ್ರಮ ನೋಡುತ್ತಾ ನನ್ನ ಬಾಲ್ಯವನ್ನು ಯೋಚಿಸುತ್ತ ಸುಮ್ಮನೆ ಮನಸಿನಲ್ಲೇ ನಕ್ಕಿದ್ದೆ ...ಮುಂದಿನ ಕಾರ್ಯಕ್ರಮಕ್ಕೆ ನಾನು ಹಾಗು ಇತರ ಇಬ್ಬರು ತೀರ್ಪುಗಾರರು ,ನನಗೆ ಇನ್ನೊಂದು ನಾಮಕರಣ ಮಾಡಿ ವೇದಿಕೆಗೆ ಕರೆದು ಹೂ ಕೊಟ್ಟು ಸ್ವಾಗತಿಸಿದರು ,ನನ್ನ ಹೆಸರು ಧೀರೇಂದ್ರ ಎಂದು ಇನ್ನೊಮ್ಮೆ ಅವರಿಗೆ ಹೇಳಿ ಕೆಳಗೆ ಬಂದೆ ....ಸರಿಯಾಗಿ 2 .45  ಕ್ಕೆ ಸ್ಪರ್ದೆ ಆರಂಭವಾಯಿತು ,ಒಟ್ಟು 3  ಸ್ಪರ್ದೆಗಳಿಗೆ ನಾವು 3  ಜನ ತೀರ್ಪುಗಾರರಾಗಿದ್ದೆವು ..ಮಕ್ಕಳ ಪ್ರತಿಭೆಯನ್ನು ನೋಡುತ್ತಾ ಕಷ್ಟ ಪಟ್ಟು ಮಾರ್ಕ್ಸ್ ಹಾಕುತಿದ್ದೆ ,ಮೊದಲ ಸ್ಪರ್ದೆ ಮುಗಿಯುವಾಗ ಸಮಯ 4.15 ..ವಿಶ್ರಾಂತಿ ನೀಡದೆ ಇನ್ನೊಂದು ಸ್ಪರ್ದೆಯನ್ನು ಆರಂಬಿಸುವರಿದ್ದ ಆಯೋಜಕರಲ್ಲಿ 2 ನಿಮಿಷ ಎಂದು ಹೊರಗೆ ಹೋಗಿ ವಾಪಾಸ್ ಬಂದೆ ...2 ನೆ ಸ್ಪರ್ದೆ ಆರಂಭವಾಯಿತು ,ಗಂಟೆ 5 .30 ಆದರೂ ಒಂದು ಲೋಟ ಟೀ ಕೂಡ ಕೊಡದೆ ಹೋದಾಗ ,ಆಯೋಜಕರ ಪರಿಚಯವ ಇರುವ ನನ್ನ ಆಂಟಿಗೆ sms ಕಳಿಸಿ ಟೀ ಬೇಕು ಎಂದೆ...15 ನಿಮಿಷ ಬಿಟ್ಟು ಸಣ್ಣ ಪ್ಲಾಸ್ಟಿಕ್ ಲೋಟದಲ್ಲಿ ತಣ್ಣನೆಯ ಟೀ ಬಂತು.!!!.....2 ನೆ ಸ್ಪರ್ದೆ ಮುಗಿಯುವಾಗ 6 .50 ..ಹೊಟ್ಟೆ ತಾಳ ಹಾಕುತಿತ್ತು ...ಒಬ್ಬ ತೀರ್ಪುಗಾರರು ಲೇಟ್ ಆಯಿತು ಹೇಳಿ ಹೊರಟೆ ಬಿಟ್ಟರು ..ಅಸ್ಟರಲ್ಲಿಯೇ ಸಂಸ್ಥೆಯ ಅದ್ಯಕ್ಷರು ಬಂದು ಸಮಯ ತುಂಬ ಆಯಿತು 3 ನೆ ಸ್ಪರ್ದೆ ಬೇಗ ಆರಂಭಿಸೋಣ ಎಂದರು ...ನಾನು ಸರ್ 8 .25 ಕ್ಕೆ ನಮ್ಮೂರಿಗೆ ಲಾಸ್ಟ್ ಬಸ್ ಎಂದಾಗ ,ಅರೆಎ ನಿಮ್ಮನ್ನು ನಾವು ಕಾರಿನಲ್ಲಿ ಡ್ರಾಪ್ ಮಾಡ್ತೇವೆ ಅಂದಾಗ ಒಪ್ಪಿದೆ ,ಸರ್ 10   ನಿಮಿಷ ಟೈಮ್ ಕೊಡಿ ಹೊರಗೆ ಹೋಗಿ ಏನಾದರು ತಿಂದು ಬರ್ತೇನೆ ,ಬಹಳ ಹಸಿವಾಗ್ತಿದೆ ಎಂದಾಗ ..ಅಯ್ಯೋ  ಬೇಡ ಬೇಡ ನಾನೇ ತಿಂಡಿ ಕಳಿಸ್ತೇನೆ ನೀವು ಕೂತ್ಕೊಳ್ಳಿ  ಎಂದು ನನ್ನನ್ನು ಹೇಳಿ ಮೂರನೆಯ ಸ್ಪರ್ದೆ ಆರಂಬಿಸಿಯೇ ಬಿಟ್ರು ,ತಿಂಡಿಗಾಗಿ ಕಾಯುತ್ತ ಮಕ್ಕಳ ಪ್ರತಿಬೆಯನ್ನು ನೋಡುತ್ತಾ ತೀರ್ಪು ನೀಡುತ್ತ ಹೋದೆ ,8 ಗಂಟೆಗೆ ಕಾರ್ಯಕ್ರಮ ಮುಗಿದ ತಕ್ಷಣ ವೇದಿಕೆಗೆ ಕರೆದು ನೆನಪಿನ ಕಾಣಿಕೆ ನೀಡುವಾಗ ಮನಸಿನಲ್ಲಿಯೇ "ಇದಕಿಂತ ತಿಂಡಿ ನೀಡಿದ್ರೆ ಸಾಕಿತ್ತು" ಎಂದು ಕೊಂಡೆ ..ಕೆಳಗೆ ಬಂದು 10 ನಿಮಿಷ ಕಾದರೂ ಯಾರೂ ವಿಚಾರಿಸದಿದ್ದಾಗ ಮೆಲ್ಲನೆ ಎದ್ದು ಹೊರಗೆ ಬಂದು ಬರುತ್ತಿರುವ ಆಟೋ ಹತ್ತಿ ಬೇಗ ಬಸ್ ಸ್ಟ್ಯಾಂಡ್ ಗೆ ಬಿಡಿ,ಲಾಸ್ಟ್ ಬಸ್ ಮಿಸ್ಸಾಗುತ್ತೆ ಎಂದಾಕ್ಷಣ ಆಟೋ ಡ್ರೈವರ್ ಫಾಸ್ಟ್ ಆಗಿ ಗಾಡಿ ಓಡಿಸುತ್ತಾ ಬಸ್ ಸ್ಟ್ಯಾಂಡ್ ತಲುಪಿದಾಗ ಬಸ್ ಮೆಲ್ಲನೆ ಹೊರಗೆ ಹೋಗುತಿತ್ತು ,ಹಣ ನೀಡಲು purse ತೆಗೆಯ ಬೇಕೆಂದಾಗ ಸರ್ ದುಡ್ಡು ಬೇಡ ಒಡಿ ಹೋಗಿ ಬಸ್ ಹಿಡಿರಿ,ಮಿಸ್ ಆದ್ರೆ ಬೇರೆ ಬುಸ್ಸಿಲ್ಲ ಎಂದ .....ಒಡಿ ಹೋಗಿ ಬಸ್ ಹತ್ತಿ ,ಫೂಟ್ ಬೋರ್ಡ್ ನಲ್ಲಿ  ತಿರುಗಿ ನಿಂತು ಕೈ ಬೀಸಿ ಡ್ರೈವರ್ ಗೆ ಥ್ಯಾಂಕ್ಸ್ ಎಂದೆ ....ಖಾಲಿ ಹೂ,ತಣ್ಣನೆಯ ಟೀ ,ಸಣ್ಣ ನೆನಪಿನ ಕಾಣಿಕೆಯನ್ನು ನೀಡಿ ,ಹಸಿವಾಗುತ್ತಿದೆ ತಿಂದು ಬರ್ತೇನೆ ಎಂದರೂ ಬಿಡದೆ ,ತಿಂಡಿಯನ್ನೂ ನೀಡದೆ ,ಕಾರ್ಯಕ್ರಮದ ನಂತರ ಮಾತನಾಡಿಸುವ ಸೌಜನ್ಯವನ್ನೂ ತೋರದ ಆ ಕೋಟು ಧರಿಸಿದ ದೊಡ್ಡ ಮನುಷ್ಯರಿಗಿಂತ ,ಈ ಆಟೋ ಡ್ರೈವರ್ ದೊಡ್ಡವರಂತೆ ಕಂಡರು ಹಾಗು ಅವರ ಮೇಲೆ ಗೌರವ ಮೂಡಿತ್ತು .....ಆ ಅಪರಿಚಿತ ಡ್ರೈವರ್ ಗೆ  ದೊಡ್ಡ ಸಲಾಂ ......
ಬಾಲ್ಯದಿಂದಲೇ ಕನಸು ಕಾಣುತ್ತ ,ಆ ಕನಸುಗಳನ್ನು ನನಸಾಗಿಸಲು ತುದಿಯುತ್ತಿರುವವನು ನಾನು .......ನನ್ನ ಕನಸುಗಲೇನು?ನನ್ನ ಬಾಲ್ಯ ಹೇಗಿತ್ತು? ಗೆಳೆಯರ ಬಗ್ಗೆ ...ಎಲ್ಲವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ ,,,,,ನಿರೀಕ್ಷಿಸಿ ,,,,,,,ನಿಮ್ಮ ,,,ಧೀರು 
ನನ್ನೆಲ್ಲ ಭಾವನೆಗಳನ್ನು ಈ ಬ್ಲಾಗ್ ನ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳಲು
ಬಯಸುತ್ತೇನೆ .....ನಿಮ್ಮ್ಮವ
                     ಧೀರು